ತುಮಕೂರು ಸ್ಥಳೀಯ ಯೋಜನಾ ಪ್ರದೇಶದಲ್ಲಿ ಪ್ರಾಧಿಕಾರವು ನಗರದ ನಾಗರೀಕ ಸೇವೆಗಳ ಅಗತ್ಯತೆಗಳನ್ನು ಪೂರೈಸಲು ಗಮನ ಹರಿಸುತ್ತಿದೆ. ನಗರದ ಯೋಜಿತ ಬೆಳವಣಿಗೆ ರೂಪಿಸಲು ಪ್ರಾಧಿಕಾರದ ವ್ಯಾಪ್ತಿಯಲ್ಲಿರತಕ್ಕ ಅಭಿವೃದ್ಧಿ ಪ್ರದೇಶಗಳ ರೂಪರೇಖೆಗಳನ್ನು (layout) ಪ್ರಾಧಿಕಾರದಿಂದ ರೂಪಿಸಿಕೊಡಲಾಗುತ್ತದೆ. ಕಟ್ಟಡ ನಿರ್ಮಾಣ ಮಾಡಲು ಯೋಜಿತ ಬೆಳವಣಿಗೆ ರೂಪಿಸಲು ಪ್ರಾಧಿಕಾರದಿಂದ ಪ್ರಾರಂಬಿಕ ಪ್ರಮಾಣ ಪತ್ರ ನೀಡಲಾಗುತ್ತದೆ. ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ, ಒಳಚರಂಡಿ ವ್ಯವಸ್ಥೆ, ನೀರಿನ ವ್ಯವಸ್ಥೆ ಹಾಗೂ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಉದ್ಯಾನವನಗಳನ್ನು ನಿರ್ಮಿಸುವುದು, ರಸ್ತೆಬದಿಗಳಲ್ಲಿ ಸಸಿಗಳನ್ನು ನೆಡುವುದು, ನಾಗರೀಕ ಸೌಕರ್ಯಕ್ಕಾಗಿ ಮೀಸಲಿರಿಸಿರುವ ಪ್ರದೇಶಗಳು ಒತ್ತುವರಿ / ಅತಿಕ್ರಮಣಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು, ನಾಗರೀಕ ಸೌಲಭ್ಯಗಳ, ಕಟ್ಟಡಗಳ ನಿರ್ಮಾಣ ಮಾಡುವುದು ಪ್ರಾಧಿಕಾರದ ಕಾರ್ಯಗಳಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತನ್ನದೇ ಆದ ಹೊಸ ವಸತಿ ಯೋಜನೆಗಳನ್ನು ರೂಪಿಸಿ ಸರ್ಕಾರದಿಂದ ಅನುಮೋದನೆ ಪಡೆದು ವಸತಿ ಬಡಾವಣೆಗಳನ್ನು ನಿರ್ಮಿಸಿ, ಸಾರ್ವಜನಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹಂಚಿಕೆ ಮಡುವುದು ಪ್ರಾಧಿಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಈ ದಿಸೆಯಲ್ಲಿ ಹಲವಾರು ವಸತಿ ಯೋಜನೆಗಳನ್ನು ಪ್ರಾಧಿಕಾರವು ರೂಪಿಸಿದ್ದು, ಬಹು ಬೇಗನೆ ಕಾರ್ಯರೂಪಕ್ಕೆ ತರಲಾಗುತ್ತಿದೆ. |